ನಮ್ಮ ಬಗ್ಗೆ…
ಈಗೇನಿದ್ದರೂ ಬೆರಳ ತುದಿಯಲ್ಲೇ ಜಗತ್ತಿನ ವಿದ್ಯಮಾನಗಳು ಲಭಿಸುತ್ತಿವೆ. ಅಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾ ಓದುಗರಲ್ಲಿ ಪ್ರಭಾವ ಬೀರಿದೆ. ಮೊದಲಿನಂತೆ ಮರುದಿನ ಬೆಳಗ್ಗೆ ದಿನಪತ್ರಿಕೆ ಓದಿ ವಿಷಯ ಅರಿಯುವ ಸನ್ನಿವೇಶ ಈಗಿಲ್ಲ. ಸ್ಥಳೀಯ, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮತ್ತು ವಿದೇಶ ಸುದ್ದಿಗಳೆಂಬ ಪ್ರತ್ಯೇಕತೆ ಈಗಿಲ್ಲ. ಘಟನೆ ನಡೆದ ಕೆಲ ಹೊತ್ತಿನಲ್ಲೇ ಮೊಬೈಲ್ನಲ್ಲಿ ಎಲ್ಲ ಪ್ರದೇಶದ ಸುದ್ದಿಗಳೂ ಕ್ಷಣಾರ್ಧದಲ್ಲಿ ಲಭ್ಯ. ಈ ನಿಟ್ಟಿನಲ್ಲಿ ‘ಹಂಪಿ ಟೈಮ್ಸ್ ವೆಬ್ ನ್ಯೂಸ್’ ಆರಂಭಿಸಿದ್ದೇನೆ. ಸ್ಥಳೀಯರು ಸೇರಿದಂತೆ ಜಗತ್ತಿನ ಹಲವೆಡೆ ವಾಸಿಸುತ್ತಿರುವ ವಿಜಯನಗರ ಜಿಲ್ಲೆಯ ಜನರಿಗೆ ವೇಗವಾಗಿ ಮತ್ತು ನಿಖರವಾಗಿ ವಿದ್ಯಮಾನಗಳನ್ನು ನೀಡುವುದು ವೆಬ್ಸೈಟ್ನ ಉದ್ದೇಶ. ಈ ಹೊಸ ಪ್ರಯತ್ನಕ್ಕೆ ನೀವೆಲ್ಲ ಬೆಂಬಲ ನೀಡಬೇಕೆಂಬ ಆಶಯ ನನ್ನದು. ಸುದ್ದಿಗಳನ್ನು ವಿಜೃಂಭಿಸದೆ, ಖಚಿತ ಮತ್ತು ವಿಶ್ವಾಸಾರ್ಹ ವಿದ್ಯಮಾನಗಳನ್ನು ಕೊಡುವುದು ‘ಹಂಪಿ ಟೈಮ್ಸ್’ ಅಜೆಂಡಾ ಆಗಿದೆ. ನನ್ನ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ.