October 29, 2024

Hampi times

Kannada News Portal from Vijayanagara

ಕುಡಿಯುವ ನೀರು ಯೋಜನೆ ಕಾಮಗಾರಿಗೆ ಶೀಘ್ರ ಚಾಲನೆ : ನೇಮಿರಾಜನಾಯ್ಕ

 

https://youtu.be/NHc6OMSu0K4?si=SI_K4goOPEgwo6h2

 

 

ಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳ ದರ್ಶನ ಪಡೆದ ಶಾಸಕ ನೇಮಿರಾಜನಾಯ್ಕ

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:

ಪಟ್ಟಣದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ತಿಂಗಳೊಳಗಾಗಿ ಚಾಲನೆ ನೀಡಲಾಗುವುದೆಂದು ಹಗರಿಬೊಮ್ಮನಹಳ್ಳಿಯ ನೂತನ ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ಪಟ್ಟಣದ ಅರಳಿಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳ ದರ್ಶನ ಪಡೆದು, ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣದ ಕುಡಿಯುವ ನೀರಿನ ಯೋಜನೆಯು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ, ಈ ಕುರಿತು ಚರ್ಚಿಸಲು 2-3ದಿನಗಳಲ್ಲಿ ಅಧಿಕಾರಿಗಳ ಸಭೆನಡೆಸಿ, ಕಾಮಗಾರಿ ಚಾಲನೆಗಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಕ್ಷೇತ್ರದ ಯುವಕರು, ಹಿತೈಷಿಗಳು, ಮಹಿಳೆಯರು ನನ್ನ ಗೆಲುವಿಗಾಗಿ, ತಮ್ಮ ಮನೆಯವನಂತೆ‌ ಭಾವಿಸಿ ಹಗಲಿರುಳು ಶ್ರಮಿಸಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಸಮಸ್ತರಿಗೆ ಅನಂತನಂತ ವಂದನೆಗಳು ಸಲ್ಲಿಸಿದರು.

ಕ್ಷೇತ್ರದ ಪ್ರತಿಯೊಬ್ಬ ಆರ್ಹ ಫಲಾನುಭವಿಗೆ ಸರ್ಕಾರದ ಯೋಜನೆಯನ್ನು ತಲುಪಿಸಲು ಮುಂದಾಗುವೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯನ್ನು ತಲುಪಿಸುವೆ ಎಂದರು. ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿ.ಎಂ.ಎಸ್.ಮಲ್ಲಿಕಾರ್ಜುನಯ್ಯ, ಗುಂಡಾಸ್ವಾಮಿ, ಎಂ.ಅಶೋಕ, ನಂದೀಶ, ಶ್ರೀಕಾಂತ್ ನಾಯ್ಕ, ಉರುವಕೊಂಡ ವೆಂಕಟೇಶ, ಕಲ್ಲಾಳಪರಶುರಾಮ, ಡಾ.ಎರ್ರಿಸ್ವಾಮಿ, ಎಲೆಗಾರ ಮಂಜುನಾಥ, ರಾಘವೇಂದ್ರ, ಎ.ಸುಭಾನ್, ರಾಜಭಕ್ಷಿ, ಎ.ರಹೀಮಾನ್, ಕುಪ್ಪಿನಕೆರೆ ವೆಂಕಟೇಶ, ಕೆ.ಜಯಪ್ರಕಾಶ್ ಸೇರಿದಂತೆ ಇತರರಿದ್ದರು.

 

 

ಜಾಹೀರಾತು
error: Content is protected !!